Wednesday, October 1, 2008

ಗೆಳೆತನ

ಪ್ರೀತಿ ಪ್ರೇಮ ಪ್ರಣಯ ಎಲ್ಲ ಸರಿ, ಆದ್ರೆ ಇದೆಲ್ಲಕಿಂತ ಮತ್ತೊಂದು ಶಬ್ದ ಮುಖ್ಯ ಅನ್ಸೊಲ್ವಾ ನಿಮಗೆ? ಮರ್ತೊಯ್ತಾ? 'ಗೆಳೆತನ' ರೀ. ಈ ವಿಚಾರವಾಗಿ ಎಷ್ಟು ಹೇಳಿದ್ರು ಮುಗಿಯೊಲ್ಲ, ಅಷ್ಟಿದೆ. 'ಸ್ನೇಹದ ಕಡಲಲ್ಲಿ, ನಿನಪಿನ ದೋಣಿಯಲಿ' ಇದನ್ನೆಲ್ಲಾ ನೆನ್ಸ್ಕೊಳೊಕ್ಕೆ ಒಂದು ಒಳ್ಳೆ ಹಾಡು. ಹಿಂದಿಯಲ್ಲಿ ಇರೋ ' ದೊಸತಿ, ಹಂ ನಹಿ ಚೋಡೆಂಗೆ' ಯಾರಿಗೆ ತಾನೆ ಮರೆಯಲು ಸಾದ್ಯ?

ಗೆಳೆತನನೆ ವಸ್ತುವಾಗಿ ಇಟ್ಕೊಂಡು ಸುಮಾರು ಚಲನಚಿತ್ರಗಳು ಬಂದಿವೆ ಎಲ್ಲ ಭಾಷೆಗಳಲ್ಲು. ಮೊನ್ನೆ ಮೊನ್ನೆ ಬಂದ 'ಗೆಳೆಯ' ಚಿತ್ರದ ಹಾಡು, 'ಪುಟಗಳ ನಡುವಿನ ಗರಿಯೆ ನೀನೊಮ್ಮೆ ಹಾರಿ ನೋಡು'. ನನ್ನ ಹಾಗೆ ಜೀವನದ ಬಹುಬಾಗ ಹಾಸ್ಟೆಲ್ ನಲ್ಲಿ (ವಿದ್ಯಾರ್ಥಿ ಭವನದಲ್ಲಿ) ಕಳೆದ ಜನರಿಗಂತೂ ಜೀವನದಲ್ಲಿ ಗೆಳೆತನ ಬಹು ಮುಖ್ಯವಾದ ಒಂದು ಸ್ಥಾನದಲ್ಲಿರುತ್ತದೆ. ಸಿಪಾಯಿ ಸಿನೆಮಾದಲ್ಲಿ ಇರುವ 'ಸ್ನೇಹಕ್ಕೆ ಸ್ನೇಹ' ಹಾಡು ಕೂಡ ಸ್ವಲ್ಪ ಖುಷಿ ಕೊಡುವ ಗೀತೆ.

ನಿಜ, ಎಷ್ಟೋ ಒಳ್ಳೆ ಗೆಳೆತನಗಳಿರೋ ಹಾಗೆ ಕೆಲವೊಮ್ಮೆ ಅಂತಸ್ತು, ಹಣ, ಅಹಂ ಗಳಿಗಾಗಿ ಕೆಲವೊಂದು ಸ್ನೇಹ ಸಂಬಂದಗಳು ಮುರಿದು ಬೀಳುತ್ತೆ. ಅದೇ ರೀತಿ ಒಂದೇ ಹುಡುಗಿಗಾಗಿ ಗೆಳೆಯರಿಬ್ಬರು ಬೇರೆಯಾಗಬಹುದು. 'ದೋಸ್ತ್ ದೋಸ್ತ್ ರಹ' ಇದೆ ಬಾವಕ್ಕೆ ಸಂಬಂದಿಸಿದ ಒಂದು ದುಃಖ ಬರಿತ ಗೀತೆ.

ಗೆಳೆತನದ ಬಗ್ಗೆ ನಮ್ಮ non-stop ಗೀತ ಪ್ರಸಾರದಲ್ಲಿ
* The Rembrandts - I'll Be There For You
* Tum Ho Toh (Rock On)
* Bill Withers - Lean on Me

ಇಂದಿನ ಸಂಚಿಕೆಗೆ ಇಷ್ಟು ಸಾಕು. ಪೂರ್ಣ ವಿರಾಮ :-)

Sunday, September 14, 2008

ಕರ್ಚಿಲ್ಲದೆ ಚಿತ್ತಾಗೋದು

ಕೆಲವೊಮ್ಮೆ ತುಂಬ ದುಡ್ಡು ಉಳ್ಸೋ ಯೋಚನೆ ಬರ್ತಿರತ್ತೆ. ಅಂತ ಸಮಯಗಳಲ್ಲಿ ಚಿತ್ತಾಗೋಕೆ ಅಂತ ಸಂಗೀತ ಕೇಳಬಹುದು. ನನ್ನ ಕೆಲವು ಸ್ನೇಹಿತರಿದ್ದಾರೆ ಅವರು ಕುಡಿಯೋದೆ ಇಲ್ಲ. ಅವರು ಚಿತ್ತಾಗೋದು ಹಾಡುಗಳನ್ನ ಕೇಳಿ. ಇತ್ತೀಚಿಗೆ ನಾನೂ ಸಹ ಹಾಡು ಕೇಳಿ ಚಿತ್ತಾಗ್ತೀನಿ. 'the doors' ಅವರ 'the end' ಹಾಡು ಹಾಗೆ ಚಿತ್ತು ಮಾಡೋ ಒಂದು ಹಾಡು. ಅದನ್ನ ಕೇಳ್ತಿದ್ದಾರೆ ಒಂದು ರೀತಿ ಮತ್ತು ಬರತ್ತೆ. ಅದನ್ನ ವಿವರಿಸೋದು ಕಷ್ಟ, ನೀವೇ ಕೇಳಿ ನೋಡಿ.
ಮತ್ತು ಬರಸೋ ಹಾಡುಗಳಿಗೆ ತುಂಬಾ ಪ್ರಸಿದ್ದವಾದವರು ಅಂದ್ರೆ 'pink floyd'. ಅವರ ಪ್ರತಿಯೊಂದು ಹಾಡು ಕೇಳಿದರೂ ಚಿತ್ತಾಗ್ತೀರ. ಹಾಡುಗಳು ಸುಮಾರು ಉದ್ದ ಇರ್ತವೆ, ಪೂರ್ತಿ ಕೇಳಿದ್ರೆ ಮಾತ್ರ ಚಿತ್ತಾಗೋ ಅನುಭವ ಬರೋದು. 'pink floyd' ಅವರ ಕೆಲವು ಆಯ್ದ ಹಾಡುಗಳು ಅಂದ್ರೆ 'another brick in the wall - 2', 'the great gig in sky', 'sarrow', 'shine on you crazy daimond'. ಇನ್ನೂ ಸುಮಾರು ಈ ರೀತಿ ಹಾಡುಗಳಿವೆ. ಈ ಮೇಲಿನ ಹಾಡುಗಳನ್ನ ಕೇಳಿ ನೀನು ಚಿತ್ತಾದಲ್ಲಿ, ಉಳಿದ ಹಾಡುಗಳನ್ನ ವಿಕಿಪೀಡಿಯಾದಲ್ಲಿ ಹುಡುಕಿ ಕೇಳಿ.
ನಾನು ಇಲ್ಲಿ ಹೇಳ್ತಾ ಇರೋ ಹಾಡುಗಳು ಅವುಗಳ ಸಾಹಿತ್ಯದಿಂದ ಮತ್ತು ಬರಿಸಲ್ಲ, ಕೇವಲ ಸಂಗೀತ ಸಂಯೋಜನೆ ನಿಮ್ಮನ್ನು ಚಿತ್ತಾಗಿಸತ್ತೆ.
'bob dylan' ಅವರ 'lay lady lay' ಕೂಡ ಅಂತದ್ದೇ ಒಂದು ಹಾಡು. ಇದೆ ರೀತಿ ಕನ್ನಡದ ಕೆಲವು ಹಾಡುಗಳೂ ಇವೆ. 'ಒಳಗೆ ಸೇರಿದರೆ ಗುಂಡು' (ನಂಜುಂಡಿ ಕಲ್ಯಾಣ), 'ಹುಡುಗ ಹುಡುಗ' (ಅಮೃತಧಾರೆ).
ಹಿಂದಿ ಚಿತ್ತುಗೀತೆ ನೋಡಿದ್ರೆ ಪಂಕಜ್ ಉದಾಸ್ ಅವರ 'महकाने से शराब', DDLJ ಚಿತ್ರದ 'ज़रा सा जूम लू में'.
ಗಮನಿಸಿ: ಈ ಹಾಡುಗಳು ನಿಮಗೆ ಚಿತ್ತಗಿಸದೆ ಇದ್ದಲ್ಲಿ, ದಯವಿಟ್ಟು ನಿಮ್ಮ ಲೆಕ್ಕದ ಚಿತ್ತುಗೀತೆಗಳನ್ನ ನಮಗೆ ನಿಮ್ಮ ಅನಿಸಿಕೆಗಳಲ್ಲಿ ತಿಳಿಸಿ.

Saturday, September 13, 2008

ವಿರಹಾ ನೂರಾರು ತರಹ..

ವಿರಹ ವೇದನೆ ಯಾರನ್ನ ಕಾಡಿಲ್ಲ? ಸರಿ, ನಾನು ಕೇವಲ ಪ್ರೇಮದ ವಿರಹ ಒಂದರ ಬಗ್ಗೆ ಮಾತಾಡುತ್ತ ಇಲ್ಲ, ಬಹು ಜನರಿಗೆ ಮನೆ ಬಿಟ್ಟು ಶಾಲೆ ಸೇರಿದಾಗ ವಿರಹದ ಬಾವನೆಗಳು ಬರುತ್ತೆ.. ರಜೆ ಬಂದಾಗ ಶಾಲೆ/ಸ್ನೇಹಿತರನ್ನ ನೆನೆಸಿಕೊಂಡು ವಿರಹದ ಬಾವನೆಗಳು ಕಾಡುತ್ತೆ. ಕಾಲೇಜಿಗೆ ಸೇರಿದ ಹೊಸತರಲ್ಲಿ ಅಮ್ಮನ ನೆನಪು, ಕೈ ಅಡುಗೆಯ ರುಚಿ ಎಲ್ಲಾ ನೆನಪಾಗ್ತಾ ಇರುತ್ತೆ, ಆಮೇಲೆ ವಯಸ್ಸು, ಪ್ರೇಯಸಿಯ ನೆನಪು ಚುಚ್ಚುತ್ತೆ, ಮದುವೆಯಾದ ಹೊಸತರಲ್ಲಿ ಹೆಂಡತಿ ತವರಿಗೆ ಹೋದಾಗ ವಿರಹ, ಇಷ್ಟೆಲ್ಲಾ ತರಹದ ವಿರಹಗಳಿಗೆ ಹೇಳಿ ಮಾಡಿಸಿದ ಹಾಡು 'ವಿರಹಾ ನೂರು ನೂರು ತರಹ'.. (ಆದರೆ ಗಮನಿಸಿ, ಇಲ್ಲಿ ನಾಯಕಿ ಪ್ರಿಯಕರನ ವಿರಹದಲ್ಲಿ ಹಾಡುತ್ತಾ ಇರುತ್ತಾಳೆ).

ಇದೆ ಗುಂಗಿನಲ್ಲಿ, ಇದೆ ಬಾವನೆಯ ಸ್ವಲ್ಪ ಹಾಡುಗಳು ನಿಮಗಾಗಿ ಇಂದು ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇವೆ.. 'ತೆರೆ ಬಿನ ಜಿಂದಗಿ ಸೆ ಕೋಯಿ (tere bina zindagi se koi)' ಯಾರಿಗೆ ತಾನೆ ನೆನಪಿಲ್ಲ.. ಅದೇ ರೀತಿ ಕೆಲವೊಬ್ಬರು ಅಂಗ್ಲ ಹಾಡುಗಳನ್ನು ಕೇಳುವವರು ಈ ಜಗತ್ಪ್ರಸಿದ್ದ ಸಿನಿಮಾದ ಮೇಲೆ ಹಾಡಿರುವ ಹಾಡು ಮರೆತಿರುವುದು ಅನುಮಾನ.. ಅಂತೆಯೇ, ಎಲ್ಲೊ ಅಲ್ಪಸ್ವಲ್ಪ ಇಂಗ್ಲಿಶ್ ಗೊತ್ತಿರೋ ನನ್ನಂತವ್ರಿಗೂ ಗೊತ್ತಿರೋ ಹಾಡೇ 'my heart will go on- Celine dion'.

ಅದೇ ರೀತಿ ನಂ ಸುದೀಪಣ್ಣ ನಟಿಸಿರುವ ಸಿನಿಮಾ ಹುಚ್ಚದಲ್ಲಿನ ಹಾಡು 'ಯಾರೋ ಯಾರೋ ಗೀಚಿ ಹೋದ..' ಎಂತವರ ಕರಳನ್ನಾದರೂ ಕಲಕುತ್ತೆ. ಈ ಹಾಡಿನಲ್ಲೂ ವಿರಹದ ಬಾವನೆ ಇದೆ.

ಪ್ರೇಯಸಿ ಕೈ ಕೊಟ್ಟು ಬೇರೊಬ್ಬನೊಡನೆ ಹೋದಾಗ ವಿರಹದಲ್ಲಿ ತುಂಬಾ ಜನ ಕವಿಗಳಗ್ತಾರೆ. ಅದೇ ರೀತಿ ಬರೆದ ಎರಡು ಹಾಡುಗಳು ನಿಮಗಾಗಿ ಇಲ್ಲಿ. ಮೊದಲು - 'ನಾ ಚಿಕ್ಕವನಾಗಿದ್ದಾಗ ಅಪ್ಪ ಹೇಳುತ್ತಿದ್ದರು..' (ಗಮನಿಸಿ: 'ಬೇರೊಬ್ಬನ ಕೊಬ್ಬಿಗೆ ಶಾಕವಾಗಿಹಳು ನನ್ನ ಹುಡುಗಿ ಇಂದು'), ಎರಡನೆಯದಾಗಿ 'ಬಣ್ಣಿಸಲೇ ಹೆಣ್ಣೇ, ನಿನ್ನ ಏನೆಂದು ಬಣ್ಣಿಸಲೇ' (ಗಮನಿಸಿ: 'ಎಲ್ಲಡಗಿದೆ ನಲ್ಲೆ? ಇನ್ಯಾರ ತೆಕ್ಕೆಯಲ್ಲೇ..')

ಅಯ್ಯೋ ಸಾಕು ಕಣಪ್ಪ, ಇವೆ ಲವ್ವು, ಇವೆ ಕೈ ಕೊಡೋದು ಕೇಳಿ ಕೇಳಿ ಸಾಕಗಿದೆ ಅಂತೀರಾ? ಏನ್ ಮಾಡೋದು ಗುರು! ಜನ ಇವನ್ನೇ ಬೇಕು ಬೇಕು ಅಂಥ ಕೇಳ್ತಾರೆ, ಈ ಕಾರ್ಯಕ್ರಮದಲ್ಲಿ ಇಷ್ಟು ಸಾಕು, ಮುಂದಿನ ಸಂಚಿಕೆಲಿ ಬೇರೆ ವಿಚಾರ ತಗೊಳೋಣ.

ತಡೆರಹಿತ ಬಾಗದಲ್ಲಿ ಕೇಳಿ:
-> ಶಿಷಾ ಹೋ ದಿಲ್ ಹೋ
-> ನಾನೊಂದು ತೀರ, ನೀನೊಂದು ತೀರ
-> ದಿಲ್ ಕಿಸಿನೆ ಮೆರ ತೋಡ

Wednesday, September 3, 2008

ಸರಿ ರಾತ್ರಿ ಮಾತುಗಳು

ಸರಿ ರಾತ್ರಿಯಲ್ಲಿ ನಿಮಗೆ ರಸ್ತೆಯಲ್ಲಿ ಓಡಾಡುವ ಅಭ್ಯಾಸವಿದ್ದಲ್ಲಿ ನೀವು ರಸ್ತೆ ಬದಿಯ ಕುಡುಕರನ್ನ ನೋಡಿರುತ್ತೀರ. ಸಭ್ಯ ಕುಡುಕನನ್ನ 'ಕುಡುಕ' ಅಂತ ಕರೆದರೆ ಬೇಜಾರ್ ಮಾಡ್ಕೋತಾನೆ. ಇಲ್ಲಿಂದ ಮುಂದೆ 'ಮಧ್ಯಪಾನಿ' ಅಂತ ಕರೀತೀನಿ. ನನಗೆ ತಿಳಿದಿರೋ ಮಟ್ಟಿಗೆ ಸುಮಾರು ತರಹದ ಮಧ್ಯಪಾನಿಗಳಿರ್ತಾರೆ. ಕೆಲವರು ಒಂದೇ ಒಂದು peg ಕುಡೀತಾರೆ, ಸ್ನೇಹಿತರಿಗೆ jote ಕೊಡಲಿಕ್ಕೆ. ಕೆಲವರಿಗೆ ಮರುದಿನ ಬೆಳಾಗಾದ್ರೂ session ಮುಗಿದಿರಲ್ಲ. ಈ ತರಹ long innings ಆಡುವವರಿಗೆ ಒಂದು ಒಳ್ಳೆ ಹಾಡಿದೆ - 'Alabama Song (Whisky bar)'. ಈ ಹಾಡು ಹಾಡ್ತಾ ಅವರು ರಾತ್ರಿ ಇಡೀ ಊರೆಲ್ಲ ಆಲೀತಾರೆ, ಒಂದು ಕೊನೆ ಬಾಟಲ್ಗಾಗಿ.
ಇನ್ನು ಕೆಲವರಿಗೆ ದೈರ್ಯ ಸಾಲದು, ದೈರ್ಯ ಬರ್ಸ್ಕೊಳೊಕೆ ಕುಡೀತಾರೆ. 'ನಂಜುಂಡಿ ಕಲ್ಯಾಣ'ದಲ್ಲಿ ಮಾಲಾಶ್ರೀ ಮಾಡಿದ್ದು ಅದೇ. ಮಾಲಾಶ್ರೀ ದಾರಿ ಹಿಡಿದಿರೋ ಹುಡುಗೀರು ಬಹಳ ಜನ ಇರಬಹುದು, ಅಷ್ಟೆ ಹುಡುಗರು ಕೂಡ ಇರಬಹುದು. ಅದೇನೇ ಇರ್ಲಿ, ಮಾಲಾಶ್ರೀ ಕುಡಿದು ಹೇಳೋ ಹಾಡು ಮಾತ್ರ ತುಂಬಾನೆ ಜನಪ್ರಿಯ ಹಾಡು, ಇವತ್ತಿಗೂ ಕೂಡ. 'ಒಳಗೆ ಸೇರಿದರೆಗುಂಡು, ಹುಡುಗಿ ಆಗುವಳು ಗಂಡು' - ಈ ಮೊದಲು ನೀವು ಕೇಳಿರಲಿಲ್ಲ ಅಂದ್ರೆ ಈ ಕ್ಷಣ ಕೇಳಿ. ತುಂಬಾನೆ ಚೆನ್ನಾಗಿದೆ.
ಕೆಲವರಿಗೆ ಪ್ರಪಂಚ ಉದ್ದಾರ ಮಾಡೋ ಆಸೆ ಆಗತ್ತೆ ಕುಡಿದ ಮೇಲೆ. ಉದಾಹರಣೆಗೆ 'ದೇವದಾಸ್' (ಹಿಂದಿ ಚಿತ್ರ)ದಲ್ಲಿ ಜಾಕಿ ಶ್ರಾಪ್. ಮೊದಲೇ ದುಃಖದಲ್ಲಿದ್ದ ದೇವದಸನಿಗೆ ಕುಡಿಯೋದು ಕಲ್ಸಿ ಹಾಳು ಮಾಡ್ತಾನೆ. ಆ ತರಹದ ಜನ ಬಹಳ ಸಿಕ್ತಾರೆ ಪ್ರಪಂಚದಲ್ಲಿ. ಆ ಮಾದರಿಯ ಎಲ್ಲ ಜನರಿಗೂ ನಮ್ಮಿಂದ ದೇವದಾಸ್ ಚಿತ್ರದ 'ಚಲಕ್ ಚಲಕ್' ಹಾಡನ್ನ ಅರ್ಪಿಸುತ್ತಿದ್ದೇವೆ.
ಕೆಲವರು ಕುಡಿದ ಮೇಲೆ ತುಂಬ ಮಾತಾಡ್ತಾರೆ. ಅವರು ಮಾಡೋ ಕೆಲಸದ ಬಗ್ಗೆ, ಅವರ ಇದುವರೆಗಿನ ಸಾಧನೆಗಳ ಬಗ್ಗೆ. ಕೇಳಿಸಿಕೊಳ್ಳೋವನಿಗೆ ಆಸಕ್ತಿ ಇದೆಯೋ ಇಲ್ಲವೋ ಅನ್ನೋದು ಅವರ ಲೆಕ್ಕಕ್ಕೆ ನಿಲುಕದ ವಿಷಯ. ಅದೇ 'ಯುದ್ದಕಾಂಡ' ಚಿತ್ರದಲ್ಲಿ ನಮ್ಮ ರವಿಚಂದ್ರನ್ ಹೇಳ್ತಾರಲ್ಲ 'ಕುಡಿಯೋದೆ ನನ್ನ weakness, ಆದರೆ ನ್ಯಾಯಕೆ ದುಡಿಯೋದೆ ನನ್ನ business' - ಕುಡಿಯೋದು weakness ನಿಜ, ಆದರೆ ಅದರ ನಂತರ ಹೇಳಿದ್ದು ನಂಬೋದು ಸ್ವಲ್ಪ ಕಷ್ಟ, ಯಾಕಂದ್ರೆ ಈಗ ಮಾತಾಡ್ಸ್ತಿರೋದು ಎಣ್ಣೆ.
ಕೆಲವರಿಗೆ ಕುಡಿತ ಯಾವ ಮಟ್ಟಿಗೆ weakness ಅಂದ್ರೆ, ಮಧ್ಯದ ಬಾಟಲ್ ಕೈಗೆ ಬಿದ್ರೆ ಸಾಕು ಎಲ್ಲ ಕೆಲಸ ಮರೆತು ಬಿಡ್ತಾರೆ. ಇದನ್ನ ಸಿನೆಮಾದಲ್ಲಿ ಚೆನ್ನಾಗಿ ತೋರ್ಸ್ತಾರೆ. 'ಚಂದು' ಚಿತ್ರದಲ್ಲಿ ನಮ್ಮ ಸುದೀಪನ್ನ ತಗೋಳಿ, ಹೆಂಡದ ಬಾಟಲ್ ಕೈಗೆ ಸಿಕ್ಕಿದ್ದೇ ತಡ ಏನೇನೋ ನೆನಸ್ಕೊಂಡು ಸುಮಾರೆ 'double meaning' ಇರೋ ಹಾಡನ್ನ ಹಾಡ್ತಾರೆ. 'ಸೊಂಟದ ವಿಸ್ಯ ಬ್ಯಾಡವೋಸಿಸ್ಯಾ' .
ಕೆಲವರಿಗೆ ಆಸೆ ಇರತ್ತೆ, ತಮ್ಮ ಹೆಂಡತಿನೆ ತನ್ನ ಕಯ್ಯಾರೆ 'ಮಧ್ಯ'ದ ಬಾಟಲ್ ತಂದು ಕೊಡ್ತಾಳೆ ಅಂತ. ಸ್ವಲ್ಪ ಇದೆ ರೀತಿ ಆಸೆಯನ್ನ ರಾಜರತ್ನಂ ಅವರು 'ಹೇಳ್ಕೋಳಾಕೊಂದೂರು, ತಲೆಮ್ಯಾಗೆ ಒಂದ್ ಸೂರು' ಅನ್ನೋ ಪದ್ಯದಲ್ಲಿ ಒಂದು ಸಾಲಿನಲ್ಲಿ ಹೇಳ್ತಾರೆ.
ಕುಡುಕರ, ಕ್ಷಮಿಸಿ, 'ಮಧ್ಯಪಾನಿ'ಗಳ ಹಾಡುಗಳು, ಅದಕ್ಕೆ ಹೊಂದುವಂತ ಸನ್ನಿವೇಶಗಳು ನಿಮಗೆ ತಿಳಿದಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

ಈ ಸಮಯದ ನಮ್ಮ ನೆಚ್ಚಿನ ಗೀತೆಗಳು:
'here comes the sun' - The Beatles
'daaru vich pyaar' - Tum Bin

Tuesday, September 2, 2008

ಮುಸ್ಸಂಜೆ ಮಾತು

ಹೌದು ನಾವು ನಮ್ಮ ಕಾರ್ಯಕ್ರಮದ ಹೆಸರನ್ನ ಕದ್ದಿದೀವಿ (:o), 'ಮುಸ್ಸಂಜೆ ಮಾತು' ಅನ್ನೋ ಕನ್ನಡ ಚಲನಚಿತ್ರದಲ್ಲಿ 'ಮುಸ್ಸಂಜೆ ಮಾತು' ಅಂತ ಒಂದು ಕಾರ್ಯಕ್ರಮ ಬರತಾ ಇರತ್ತೆ. ಅದೂ ಕೂಡ ರೇಡಿಯೋದಲ್ಲಿ. ಆ ಚಲನಚಿತ್ರ 'ಮುಸ್ಸಂಜೆ ಮಾತು' ಮತ್ತು ನಮ್ಮ 'ಮುಸ್ಸಂಜೆ ಮಾತು' ನಡುವೆ ವ್ಯತ್ಯಾಸವಿದೆ. ಅಲ್ಲಿ ನಿಜಾವಾದ ಮಾತುಗಳನ್ನ ಕೇಳಬಹುದಿತ್ತು, ಆದರೆ ಇಲ್ಲಿ ಓದಬೇಕು. ಅಂದ್ರೆ ಪ್ರೇಕ್ಷಕರಿಗೆ ಇಲ್ಲಿ ಸ್ವಲ್ಪ ಜಾಸ್ತಿ ಕೆಲಸ. (ಆದರೆ ಆ 'ಮುಸ್ಸಂಜೆ ಮಾತು' ಕಾರ್ಯಕ್ರಮದಲ್ಲಿ ಇದ್ದ ಹಿಂಸೆ ಈ ಕಾರ್ಯಕ್ರಮದಲ್ಲಿ ಇಲ್ಲ).

ಸರಿ, ಈಗ ವಿಷಯಕ್ಕೆ ಬರೋಣ... 'ಮುಸ್ಸಂಜೆ ಮಾತು' ಯಾವ ವಿಷಯದ ಬಗ್ಗೆ ಇರತ್ತೆ ಅಂತ. ಈ ದಿನ ನಮ್ಮ 'ಬ್ಯುಗಲ್-ರಾಕ್'ನ ಮೊದಲನೆ ದಿನ, ಇದರಿಂದ 'ಬ್ಯುಗಲ್-ರಾಕ್' ತಂಡಕ್ಕೆ ಇದು ಸಂತೋಷದ ದಿನ.

ಶಂಕರ್ ನಾಗ್ ರ 'ಗೀತ' ಚಿತ್ರದ 'ಸಂತೋಷಕ್ಕೆ ಹಾಡು ಸಂತೋಷಕ್ಕೆ' ಹಾಡು ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ಗೀತೆ. ಈ ಹಾಡು ಆಗಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿತ್ತು ಇಲ್ಲವೊ ನಮಗೆ ತಿಳ್ದಿಲ್ಲ. ಈ ಹಾಡು ಖಂಡಿತವಾಗಿ ಈಗಿನ ಪೀಳಿಗೆಗೆ ಹೇಳಿ ಮಾಡಿಸಿದ ಹಾಗಿದೆ. ಹಾಡಿನ ಮೊದಲನೆ ಸಾಲಿನಿಂದ ಕೊನೆಯ ಸಾಲಿನವರೆಗೂ ಉಲ್ಲಾಸಬರಿತವಾಗಿದೆ.

'ಇವನ್ಯಾರಪ್ಪ ಹುಚ್ಚ ಸುಮ್ನೆ ಕುಯ್ದಿದಾನೆ, ಯಾರು ಓದ್ತಾರೆ ಈ ಕಿತ್ತೋಗಿರೋ ರೇಡಿಯೋ ಬಗ್ಗೆ' ಅನ್ಕೊತಿದೀರ? ಪರವಾಗಿಲ್ಲ, ನನ್ನ ಸ್ಟೈಲು ಬೇರೇನೆ. 'ಬ್ಯುಗಲ್-ರಾಕ್' ತಂಡಕ್ಕೆ ಈ ರೇಡಿಯೋ ಇಂದ ಯಾವುದೇ ರೀತಿಯ ಆದಾಯ ಇಲ್ಲ, ಓದಿದ್ರೆ ನಿಮಗೆ ನಿಮ್ಮ ಮನದಾಳದಲ್ಲಿ ಎಲ್ಲೋ ಹುದುಗಿ ಹೋಗಿರುವ ನಿಮ್ಮ ಬಾಲ್ಯದ ನೆಚ್ಚಿನ ಹಾಡು ಮತ್ತೆ ನೆನಪಾಗಬಹುದು.

ಈಗ 'ಮೈ ಆಟೋಗ್ರಾಫ್' ಚಿತ್ರದ 'ಸವಿ ಸವಿ ನೆನಪು' ಹಾಡು ಕೇಳ್ತಾ ಸ್ವಲ್ಪ ಗತಿಸಿಹೋದ ಬಾಲ್ಯದ ಬಗ್ಗೆ ಮಾತಾಡೋಣ. ತುಂಬಾ ಸ್ನೇಹಿತರು ಮಾತಾಡೋದನ್ನ ಕೇಳಿದೀನಿ 'ನಮ್ಮ ವೃತ್ತಿಜೀವನ ಮತ್ತು ವಯ್ಯಕ್ತಿಕ ಜೀವನ, ಎರಡನ್ನೂ ಯಾವುದೇ ಕಾರಣಕ್ಕೂ ಸೇರಿಸಬಾರದು'. ಮತ್ತು ಇದು ಈ ವಯಸ್ಸಿನಲ್ಲಿ ಇದು ಸಾದ್ಯ ಕೂಡ. ಆದರೆ ಬಾಲ್ಯದಲ್ಲಿ ಹಾಗಿರಲಿಲ್ಲ, ಆಗ ಎಲ್ಲವೂ ಒಂದೇ. ಮೇಸ್ಟ್ರು ಕೊಟ್ಟ ಕೆಲಸ ಮುಗ್ಸಿರಲ್ಲ, ಕಾರಣ ಏನೇ ಇರ್ಲಿ ಬಾಯಿಗೆ ಬರೋದು 'ಹೊಟ್ಟೆ ನೋವು'. ಅಂಗಡಿಗೆ ಹೋಗಿ ತರಕಾರಿ ತಗೊಂಡು ಬಾ ಅಂತ ಅಮ್ಮ ಹೇಳಿದ್ರೆ, 'ಹೋಂ-ವರ್ಕ್ ಮಾಡ್ತಿದೀನಿ, ಈಗ ಆಗಲ್ಲ'. ಅಷ್ಟೆ ಅಲ್ಲ, ಮನೆಯಲ್ಲಿ ಹಬ್ಬ ಇದ್ದರೆ ಮುಗೀತು, 'ಹೋಂ-ವರ್ಕ್' ಏನೂ ಮಾಡಲ್ಲ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೀತಿದ್ರೆ ಮನೆ ನೆನಪಾಗಲ್ಲ. ಆದರೆ ಈಗ 'ಎಲ್ಲೇ ಇರು, ಹೇಗೆ ಇರು ನೆನಪಲ್ಲಿ ಇರೋದು ಕೆಲಸ ಒಂದೇ'. ಜೀವನದ ಎಲ್ಲಾ ಸಮಯ-ಪತ್ತಿಗಳನ್ನ ನಿರ್ಧರಿಸೋದು 'ಕೆಲಸ'. ಗಣೇಶನ ಹಬ್ಬ ಬುಧವಾರ ಇದ್ದರೆ, 'ನಂಗೆ ಕೆಲಸ ಇರತ್ತೆ, ಅದಕ್ಕೆ ಇವತ್ತೇ ಗಣೇಶಣ್ಣ ಮನೆಗೆ ತರ್ತೀನಿ' ಅಂತ ಭಾನುವಾರಾನೆ ಗಣೇಶ ತಗೊಂಡು ಹೋದ ನನ್ನ ಒಬ್ಬ ಸ್ನೇಹಿತ.

ಅಮೇರಿಕಾ! ಅಮೇರಿಕಾ!! ಚಿತ್ರದ 'ಯಾವ ಮೋಹನ ಮುರಳಿ ಕರೆಯಿತು' ಹಾಡು ಕೇಳ್ತಾ ಮುಂದುವರಿಸೋಣ. ಚಿತ್ರದಲ್ಲಿ ಈ ಹಾಡು ಕಳೆದು ಹೋದ ಸ್ನೇಹಿತನನ್ನ ಕುರಿತು ಹೇಳಲಾಗಿದೆ.

ಜೀವನದ ಜೊತೆಗಿನ ಹೊಂದಾಣಿಕೆ ಬಹಳ ಮುಖ್ಯ, ಆದರೆ ಹೊಂದಾಣಿಕೆಗಳು ನಮ್ಮನ್ನೇ ಕೊಲ್ಲುವ ರೀತಿ ಇರಬಾರದು. ಈ ಬಗ್ಗೆ ಇನ್ನಷ್ಟು ಮಾತು ನಮ್ಮ ಮುಂದಿನ ಸಂಚಿಕೆಯಲ್ಲಿ.

ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ಹಾಡುಗಳು:
'ನೋಡಿ ಸ್ವಾಮಿ ನಾವಿರೋದು ಹೀಗೆ' (ನೋಡಿ ಸ್ವಾಮಿ ನಾವಿರೋದು ಹೀಗೆ).
'Sinbad the Sailor' (Rock on!!).
'ಬಾನಲ್ಲಿ ಓಡೋ ಮೇಘ' (ಅಮೇರಿಕಾ! ಅಮೇರಿಕಾ!!)

ಭಾಷೆಗಳ ಗಡಿ ಮೀರಿ ಸಂಗೀತ

ಇಲ್ಲಿ ನಿಮಗೆ ಸಿಗುವುದು ಕನ್ನಡದ ಮಾತುಗಳು ಮತ್ತು ಬಾಷೆಯ ಬೇದವಿಲ್ಲದ ಸಂಗೀತ.

ನಾವು ಕನ್ನಡ ಬಿಟ್ಟು ಬೇರೆ ಬಾಷೆಯಲ್ಲಿ ವಿಶ್ಲೇಷಣೆ ಕೊಡುವ ಸಾಧ್ಯತೆಗಳಿಲ್ಲ, ಕನ್ನಡ ಕಲಿತು ಇಲ್ಲಿ ಬನ್ನಿ ಅಥವಾ ಇಲ್ಲೇ ಕನ್ನಡ ಕಲಿಯಿರಿ.

ಪ್ರತಿ ದಿನ ಸಂಜೆ ೫ ಘಂಟೆಗೆ ನಮ್ಮ ಕಾರ್ಯಕ್ರಮ.

ಈ ಪುಟವನ್ನ ಗುರುತು ಹಾಕಿಕೊಳ್ಳಿ.