Wednesday, September 3, 2008

ಸರಿ ರಾತ್ರಿ ಮಾತುಗಳು

ಸರಿ ರಾತ್ರಿಯಲ್ಲಿ ನಿಮಗೆ ರಸ್ತೆಯಲ್ಲಿ ಓಡಾಡುವ ಅಭ್ಯಾಸವಿದ್ದಲ್ಲಿ ನೀವು ರಸ್ತೆ ಬದಿಯ ಕುಡುಕರನ್ನ ನೋಡಿರುತ್ತೀರ. ಸಭ್ಯ ಕುಡುಕನನ್ನ 'ಕುಡುಕ' ಅಂತ ಕರೆದರೆ ಬೇಜಾರ್ ಮಾಡ್ಕೋತಾನೆ. ಇಲ್ಲಿಂದ ಮುಂದೆ 'ಮಧ್ಯಪಾನಿ' ಅಂತ ಕರೀತೀನಿ. ನನಗೆ ತಿಳಿದಿರೋ ಮಟ್ಟಿಗೆ ಸುಮಾರು ತರಹದ ಮಧ್ಯಪಾನಿಗಳಿರ್ತಾರೆ. ಕೆಲವರು ಒಂದೇ ಒಂದು peg ಕುಡೀತಾರೆ, ಸ್ನೇಹಿತರಿಗೆ jote ಕೊಡಲಿಕ್ಕೆ. ಕೆಲವರಿಗೆ ಮರುದಿನ ಬೆಳಾಗಾದ್ರೂ session ಮುಗಿದಿರಲ್ಲ. ಈ ತರಹ long innings ಆಡುವವರಿಗೆ ಒಂದು ಒಳ್ಳೆ ಹಾಡಿದೆ - 'Alabama Song (Whisky bar)'. ಈ ಹಾಡು ಹಾಡ್ತಾ ಅವರು ರಾತ್ರಿ ಇಡೀ ಊರೆಲ್ಲ ಆಲೀತಾರೆ, ಒಂದು ಕೊನೆ ಬಾಟಲ್ಗಾಗಿ.
ಇನ್ನು ಕೆಲವರಿಗೆ ದೈರ್ಯ ಸಾಲದು, ದೈರ್ಯ ಬರ್ಸ್ಕೊಳೊಕೆ ಕುಡೀತಾರೆ. 'ನಂಜುಂಡಿ ಕಲ್ಯಾಣ'ದಲ್ಲಿ ಮಾಲಾಶ್ರೀ ಮಾಡಿದ್ದು ಅದೇ. ಮಾಲಾಶ್ರೀ ದಾರಿ ಹಿಡಿದಿರೋ ಹುಡುಗೀರು ಬಹಳ ಜನ ಇರಬಹುದು, ಅಷ್ಟೆ ಹುಡುಗರು ಕೂಡ ಇರಬಹುದು. ಅದೇನೇ ಇರ್ಲಿ, ಮಾಲಾಶ್ರೀ ಕುಡಿದು ಹೇಳೋ ಹಾಡು ಮಾತ್ರ ತುಂಬಾನೆ ಜನಪ್ರಿಯ ಹಾಡು, ಇವತ್ತಿಗೂ ಕೂಡ. 'ಒಳಗೆ ಸೇರಿದರೆಗುಂಡು, ಹುಡುಗಿ ಆಗುವಳು ಗಂಡು' - ಈ ಮೊದಲು ನೀವು ಕೇಳಿರಲಿಲ್ಲ ಅಂದ್ರೆ ಈ ಕ್ಷಣ ಕೇಳಿ. ತುಂಬಾನೆ ಚೆನ್ನಾಗಿದೆ.
ಕೆಲವರಿಗೆ ಪ್ರಪಂಚ ಉದ್ದಾರ ಮಾಡೋ ಆಸೆ ಆಗತ್ತೆ ಕುಡಿದ ಮೇಲೆ. ಉದಾಹರಣೆಗೆ 'ದೇವದಾಸ್' (ಹಿಂದಿ ಚಿತ್ರ)ದಲ್ಲಿ ಜಾಕಿ ಶ್ರಾಪ್. ಮೊದಲೇ ದುಃಖದಲ್ಲಿದ್ದ ದೇವದಸನಿಗೆ ಕುಡಿಯೋದು ಕಲ್ಸಿ ಹಾಳು ಮಾಡ್ತಾನೆ. ಆ ತರಹದ ಜನ ಬಹಳ ಸಿಕ್ತಾರೆ ಪ್ರಪಂಚದಲ್ಲಿ. ಆ ಮಾದರಿಯ ಎಲ್ಲ ಜನರಿಗೂ ನಮ್ಮಿಂದ ದೇವದಾಸ್ ಚಿತ್ರದ 'ಚಲಕ್ ಚಲಕ್' ಹಾಡನ್ನ ಅರ್ಪಿಸುತ್ತಿದ್ದೇವೆ.
ಕೆಲವರು ಕುಡಿದ ಮೇಲೆ ತುಂಬ ಮಾತಾಡ್ತಾರೆ. ಅವರು ಮಾಡೋ ಕೆಲಸದ ಬಗ್ಗೆ, ಅವರ ಇದುವರೆಗಿನ ಸಾಧನೆಗಳ ಬಗ್ಗೆ. ಕೇಳಿಸಿಕೊಳ್ಳೋವನಿಗೆ ಆಸಕ್ತಿ ಇದೆಯೋ ಇಲ್ಲವೋ ಅನ್ನೋದು ಅವರ ಲೆಕ್ಕಕ್ಕೆ ನಿಲುಕದ ವಿಷಯ. ಅದೇ 'ಯುದ್ದಕಾಂಡ' ಚಿತ್ರದಲ್ಲಿ ನಮ್ಮ ರವಿಚಂದ್ರನ್ ಹೇಳ್ತಾರಲ್ಲ 'ಕುಡಿಯೋದೆ ನನ್ನ weakness, ಆದರೆ ನ್ಯಾಯಕೆ ದುಡಿಯೋದೆ ನನ್ನ business' - ಕುಡಿಯೋದು weakness ನಿಜ, ಆದರೆ ಅದರ ನಂತರ ಹೇಳಿದ್ದು ನಂಬೋದು ಸ್ವಲ್ಪ ಕಷ್ಟ, ಯಾಕಂದ್ರೆ ಈಗ ಮಾತಾಡ್ಸ್ತಿರೋದು ಎಣ್ಣೆ.
ಕೆಲವರಿಗೆ ಕುಡಿತ ಯಾವ ಮಟ್ಟಿಗೆ weakness ಅಂದ್ರೆ, ಮಧ್ಯದ ಬಾಟಲ್ ಕೈಗೆ ಬಿದ್ರೆ ಸಾಕು ಎಲ್ಲ ಕೆಲಸ ಮರೆತು ಬಿಡ್ತಾರೆ. ಇದನ್ನ ಸಿನೆಮಾದಲ್ಲಿ ಚೆನ್ನಾಗಿ ತೋರ್ಸ್ತಾರೆ. 'ಚಂದು' ಚಿತ್ರದಲ್ಲಿ ನಮ್ಮ ಸುದೀಪನ್ನ ತಗೋಳಿ, ಹೆಂಡದ ಬಾಟಲ್ ಕೈಗೆ ಸಿಕ್ಕಿದ್ದೇ ತಡ ಏನೇನೋ ನೆನಸ್ಕೊಂಡು ಸುಮಾರೆ 'double meaning' ಇರೋ ಹಾಡನ್ನ ಹಾಡ್ತಾರೆ. 'ಸೊಂಟದ ವಿಸ್ಯ ಬ್ಯಾಡವೋಸಿಸ್ಯಾ' .
ಕೆಲವರಿಗೆ ಆಸೆ ಇರತ್ತೆ, ತಮ್ಮ ಹೆಂಡತಿನೆ ತನ್ನ ಕಯ್ಯಾರೆ 'ಮಧ್ಯ'ದ ಬಾಟಲ್ ತಂದು ಕೊಡ್ತಾಳೆ ಅಂತ. ಸ್ವಲ್ಪ ಇದೆ ರೀತಿ ಆಸೆಯನ್ನ ರಾಜರತ್ನಂ ಅವರು 'ಹೇಳ್ಕೋಳಾಕೊಂದೂರು, ತಲೆಮ್ಯಾಗೆ ಒಂದ್ ಸೂರು' ಅನ್ನೋ ಪದ್ಯದಲ್ಲಿ ಒಂದು ಸಾಲಿನಲ್ಲಿ ಹೇಳ್ತಾರೆ.
ಕುಡುಕರ, ಕ್ಷಮಿಸಿ, 'ಮಧ್ಯಪಾನಿ'ಗಳ ಹಾಡುಗಳು, ಅದಕ್ಕೆ ಹೊಂದುವಂತ ಸನ್ನಿವೇಶಗಳು ನಿಮಗೆ ತಿಳಿದಿದ್ದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

ಈ ಸಮಯದ ನಮ್ಮ ನೆಚ್ಚಿನ ಗೀತೆಗಳು:
'here comes the sun' - The Beatles
'daaru vich pyaar' - Tum Bin

2 comments:

Unknown said...

ನಂಮ್ ಜೆಪಿರಾಜರತ್ನಂ ಮಸ್ತ್ ಬರ್ದಿದಾರೆ ಸಿಸ್ಯ, ಕುಡ್ಕರ ಬಗ್ಗೆ.. 'ದೇವ್ರೆ ನಿಂಗೆ ಜೋಡಿಸ್ತಿನಿ, ಹೆಂಡ ಮುಟ್ಟಿದ ಕೈನ. ಭೂಮಿ ಉದ್ದಕು ಬಗ್ಗಿಸ್ತಿನಿ ಎಣ್ಣೆ ತುಂಬ್ಕೊಂಡ್ ಮೈನ' ಅಂತ.. ಇದೆ ರೀತಿ ಅವ್ರ ಸುಮಾರು ಹಾಡು ಇದೆ, ಅದನ್ನ ಪ್ರಸಾರ ಮಾಡಿ.

Priyank said...

ಎರಡನೇ ಸೆಶನ್ ಚೆನ್ನಾಗಿ ಮೂಡಿ ಬಂದಿದೆ.
ರವಿಚಂದ್ರನ್ ಹೇಳಿದಾ "ನ್ಯಾಯಕೆ ದುಡಿಯೋದು ನನ್ನ ಬುಜಿನೆಸ್ಸ್" ನಂಬೋದು ಕಷ್ಟನೇ.
ಹಾ ಹಾ .