Tuesday, September 2, 2008

ಮುಸ್ಸಂಜೆ ಮಾತು

ಹೌದು ನಾವು ನಮ್ಮ ಕಾರ್ಯಕ್ರಮದ ಹೆಸರನ್ನ ಕದ್ದಿದೀವಿ (:o), 'ಮುಸ್ಸಂಜೆ ಮಾತು' ಅನ್ನೋ ಕನ್ನಡ ಚಲನಚಿತ್ರದಲ್ಲಿ 'ಮುಸ್ಸಂಜೆ ಮಾತು' ಅಂತ ಒಂದು ಕಾರ್ಯಕ್ರಮ ಬರತಾ ಇರತ್ತೆ. ಅದೂ ಕೂಡ ರೇಡಿಯೋದಲ್ಲಿ. ಆ ಚಲನಚಿತ್ರ 'ಮುಸ್ಸಂಜೆ ಮಾತು' ಮತ್ತು ನಮ್ಮ 'ಮುಸ್ಸಂಜೆ ಮಾತು' ನಡುವೆ ವ್ಯತ್ಯಾಸವಿದೆ. ಅಲ್ಲಿ ನಿಜಾವಾದ ಮಾತುಗಳನ್ನ ಕೇಳಬಹುದಿತ್ತು, ಆದರೆ ಇಲ್ಲಿ ಓದಬೇಕು. ಅಂದ್ರೆ ಪ್ರೇಕ್ಷಕರಿಗೆ ಇಲ್ಲಿ ಸ್ವಲ್ಪ ಜಾಸ್ತಿ ಕೆಲಸ. (ಆದರೆ ಆ 'ಮುಸ್ಸಂಜೆ ಮಾತು' ಕಾರ್ಯಕ್ರಮದಲ್ಲಿ ಇದ್ದ ಹಿಂಸೆ ಈ ಕಾರ್ಯಕ್ರಮದಲ್ಲಿ ಇಲ್ಲ).

ಸರಿ, ಈಗ ವಿಷಯಕ್ಕೆ ಬರೋಣ... 'ಮುಸ್ಸಂಜೆ ಮಾತು' ಯಾವ ವಿಷಯದ ಬಗ್ಗೆ ಇರತ್ತೆ ಅಂತ. ಈ ದಿನ ನಮ್ಮ 'ಬ್ಯುಗಲ್-ರಾಕ್'ನ ಮೊದಲನೆ ದಿನ, ಇದರಿಂದ 'ಬ್ಯುಗಲ್-ರಾಕ್' ತಂಡಕ್ಕೆ ಇದು ಸಂತೋಷದ ದಿನ.

ಶಂಕರ್ ನಾಗ್ ರ 'ಗೀತ' ಚಿತ್ರದ 'ಸಂತೋಷಕ್ಕೆ ಹಾಡು ಸಂತೋಷಕ್ಕೆ' ಹಾಡು ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ಗೀತೆ. ಈ ಹಾಡು ಆಗಿನ ಕಾಲದಲ್ಲಿ ಹೆಚ್ಚು ಜನಪ್ರಿಯವಾಗಿತ್ತು ಇಲ್ಲವೊ ನಮಗೆ ತಿಳ್ದಿಲ್ಲ. ಈ ಹಾಡು ಖಂಡಿತವಾಗಿ ಈಗಿನ ಪೀಳಿಗೆಗೆ ಹೇಳಿ ಮಾಡಿಸಿದ ಹಾಗಿದೆ. ಹಾಡಿನ ಮೊದಲನೆ ಸಾಲಿನಿಂದ ಕೊನೆಯ ಸಾಲಿನವರೆಗೂ ಉಲ್ಲಾಸಬರಿತವಾಗಿದೆ.

'ಇವನ್ಯಾರಪ್ಪ ಹುಚ್ಚ ಸುಮ್ನೆ ಕುಯ್ದಿದಾನೆ, ಯಾರು ಓದ್ತಾರೆ ಈ ಕಿತ್ತೋಗಿರೋ ರೇಡಿಯೋ ಬಗ್ಗೆ' ಅನ್ಕೊತಿದೀರ? ಪರವಾಗಿಲ್ಲ, ನನ್ನ ಸ್ಟೈಲು ಬೇರೇನೆ. 'ಬ್ಯುಗಲ್-ರಾಕ್' ತಂಡಕ್ಕೆ ಈ ರೇಡಿಯೋ ಇಂದ ಯಾವುದೇ ರೀತಿಯ ಆದಾಯ ಇಲ್ಲ, ಓದಿದ್ರೆ ನಿಮಗೆ ನಿಮ್ಮ ಮನದಾಳದಲ್ಲಿ ಎಲ್ಲೋ ಹುದುಗಿ ಹೋಗಿರುವ ನಿಮ್ಮ ಬಾಲ್ಯದ ನೆಚ್ಚಿನ ಹಾಡು ಮತ್ತೆ ನೆನಪಾಗಬಹುದು.

ಈಗ 'ಮೈ ಆಟೋಗ್ರಾಫ್' ಚಿತ್ರದ 'ಸವಿ ಸವಿ ನೆನಪು' ಹಾಡು ಕೇಳ್ತಾ ಸ್ವಲ್ಪ ಗತಿಸಿಹೋದ ಬಾಲ್ಯದ ಬಗ್ಗೆ ಮಾತಾಡೋಣ. ತುಂಬಾ ಸ್ನೇಹಿತರು ಮಾತಾಡೋದನ್ನ ಕೇಳಿದೀನಿ 'ನಮ್ಮ ವೃತ್ತಿಜೀವನ ಮತ್ತು ವಯ್ಯಕ್ತಿಕ ಜೀವನ, ಎರಡನ್ನೂ ಯಾವುದೇ ಕಾರಣಕ್ಕೂ ಸೇರಿಸಬಾರದು'. ಮತ್ತು ಇದು ಈ ವಯಸ್ಸಿನಲ್ಲಿ ಇದು ಸಾದ್ಯ ಕೂಡ. ಆದರೆ ಬಾಲ್ಯದಲ್ಲಿ ಹಾಗಿರಲಿಲ್ಲ, ಆಗ ಎಲ್ಲವೂ ಒಂದೇ. ಮೇಸ್ಟ್ರು ಕೊಟ್ಟ ಕೆಲಸ ಮುಗ್ಸಿರಲ್ಲ, ಕಾರಣ ಏನೇ ಇರ್ಲಿ ಬಾಯಿಗೆ ಬರೋದು 'ಹೊಟ್ಟೆ ನೋವು'. ಅಂಗಡಿಗೆ ಹೋಗಿ ತರಕಾರಿ ತಗೊಂಡು ಬಾ ಅಂತ ಅಮ್ಮ ಹೇಳಿದ್ರೆ, 'ಹೋಂ-ವರ್ಕ್ ಮಾಡ್ತಿದೀನಿ, ಈಗ ಆಗಲ್ಲ'. ಅಷ್ಟೆ ಅಲ್ಲ, ಮನೆಯಲ್ಲಿ ಹಬ್ಬ ಇದ್ದರೆ ಮುಗೀತು, 'ಹೋಂ-ವರ್ಕ್' ಏನೂ ಮಾಡಲ್ಲ. ಶಾಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೀತಿದ್ರೆ ಮನೆ ನೆನಪಾಗಲ್ಲ. ಆದರೆ ಈಗ 'ಎಲ್ಲೇ ಇರು, ಹೇಗೆ ಇರು ನೆನಪಲ್ಲಿ ಇರೋದು ಕೆಲಸ ಒಂದೇ'. ಜೀವನದ ಎಲ್ಲಾ ಸಮಯ-ಪತ್ತಿಗಳನ್ನ ನಿರ್ಧರಿಸೋದು 'ಕೆಲಸ'. ಗಣೇಶನ ಹಬ್ಬ ಬುಧವಾರ ಇದ್ದರೆ, 'ನಂಗೆ ಕೆಲಸ ಇರತ್ತೆ, ಅದಕ್ಕೆ ಇವತ್ತೇ ಗಣೇಶಣ್ಣ ಮನೆಗೆ ತರ್ತೀನಿ' ಅಂತ ಭಾನುವಾರಾನೆ ಗಣೇಶ ತಗೊಂಡು ಹೋದ ನನ್ನ ಒಬ್ಬ ಸ್ನೇಹಿತ.

ಅಮೇರಿಕಾ! ಅಮೇರಿಕಾ!! ಚಿತ್ರದ 'ಯಾವ ಮೋಹನ ಮುರಳಿ ಕರೆಯಿತು' ಹಾಡು ಕೇಳ್ತಾ ಮುಂದುವರಿಸೋಣ. ಚಿತ್ರದಲ್ಲಿ ಈ ಹಾಡು ಕಳೆದು ಹೋದ ಸ್ನೇಹಿತನನ್ನ ಕುರಿತು ಹೇಳಲಾಗಿದೆ.

ಜೀವನದ ಜೊತೆಗಿನ ಹೊಂದಾಣಿಕೆ ಬಹಳ ಮುಖ್ಯ, ಆದರೆ ಹೊಂದಾಣಿಕೆಗಳು ನಮ್ಮನ್ನೇ ಕೊಲ್ಲುವ ರೀತಿ ಇರಬಾರದು. ಈ ಬಗ್ಗೆ ಇನ್ನಷ್ಟು ಮಾತು ನಮ್ಮ ಮುಂದಿನ ಸಂಚಿಕೆಯಲ್ಲಿ.

ಈ ಸಂದರ್ಭದಲ್ಲಿ ನಮ್ಮ ನೆಚ್ಚಿನ ಹಾಡುಗಳು:
'ನೋಡಿ ಸ್ವಾಮಿ ನಾವಿರೋದು ಹೀಗೆ' (ನೋಡಿ ಸ್ವಾಮಿ ನಾವಿರೋದು ಹೀಗೆ).
'Sinbad the Sailor' (Rock on!!).
'ಬಾನಲ್ಲಿ ಓಡೋ ಮೇಘ' (ಅಮೇರಿಕಾ! ಅಮೇರಿಕಾ!!)

3 comments:

deathstar said...

ಸಕತ್ ಐಡಿಯಾ ಗೌಡ್ರೆ. ಚೆನ್ನಾಗಿ ಬರೆದಿದ್ದೀರ. ಇನ್ನು ಹೆಚ್ಚು ಬರೀರಿ.

Priyank said...

ನಿಮ್ಮ ಬ್ಲಾಗ್ನಲ್ಲಿ ಹೊಸ ಚಿತ್ರ ಗೀತೆಗಳ ಪ್ರಸಾರ ಆಗುತ್ತಾ ?
ಹಾಗೂ, ಜನಪದ ಗೀತೆಗಳ ಪ್ರಸಾರ ಮಾಡ್ರಿ.

Unknown said...

ಕೂಳೆ -)